Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಜಲರಥೋತ್ಸವ
Date:-10.08.2025 ಶ್ರೀ ಸಿದ್ಧಾರೂಢಸ್ವಾಮಿಗಳ ಪುಣ್ಯಾರಾಧನೆ, ಜಲರಥೋತ್ಸವ
ಸ್ವಾತಂತ್ರ್ಯ ದಿನಾಚರಣೆ
Date:-15.08.2025 ಸ್ವಾತಂತ್ರ್ಯ ದಿನಾಚರಣೆ
ಶ್ರಾವಣ ಮಾಸದ ಸಪ್ತಾಹ
Date:-04-08-2025 ಶ್ರೀ ಸಿದ್ಧಾರೂಢಸ್ವಾಮಿಗಳ ಶ್ರಾವಣ ಮಾಸದ ಸಪ್ತಾಹ ಆರಂಭ

Daily News
ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಲೆಕ್ಕ ಪರಿಶೋಧಕರ ಬೆಟ್ಟಿ.

ದಿನಾಂಕ:-25.07.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಸನ್ಮಾನ್ಯ ಶ್ರೀ ಸಿಎ. ಕೆ. ರಘು, ಲೆಕ್ಕ ಪರಿಶೋಧಕರು, ಮಾಜಿ ಅಧ್ಯಕ್ಷರು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ, ನ್ಯೂ ದೆಹಲಿ, ಸನ್ಮಾನ್ಯ ಶ್ರೀ ಸಿಎ. ಕೋಥಾ ಶ್ರೀನಿವಾಸ, ಲೆಕ್ಕ ಪರಿಶೋಧಕರು, ಮಾಜಿ ಚೇರ್‌ಮನ್ನರು, ಎಸ್.ಐ.ಆರ್.ಸಿ. ಚೆನೈ, ಹಾಗೂ ಲೆಕ್ಕ ಪರಿಶೋಧಕರುಗಳಾದ ಸನ್ಮಾನ್ಯ ಶ್ರೀ ಸಿಎ. ಎನ್.ಎಸ್. ಅಯ್ಯನಗೌಡರ, ಹುಬ್ಬಳ್ಳಿ, ಸನ್ಮಾನ್ಯ ಶ್ರೀ ಸಿಎ. ಭರತ ಬಂಡಾರಿ, ಹುಬ್ಬಳ್ಳಿ ಹಾಗೂ ಸಿಎ. ಎಸ್.ಎನ್. ಮನ್ನಾಪುರ, ಇಳಕಲ್ ಇವರುಗಳು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ, ಗೌರವ ಧರ್ಮದರ್ಶಿಗಳಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಆದಾಯ ತೆರಿಗೆ ಆಯುಕ್ತರ ಬೆಟ್ಟಿ.

ದಿನಾಂಕ:-18.07.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಸನ್ಮಾನ್ಯ ಶ್ರೀ ಜಿತೇಂದ್ರಕುಮಾರ, ಆಯುಕ್ತರು, ಆದಾಯ ತೆರಿಗೆ ಇಲಾಖೆ, ಬೆಂಗಳೂರು, ಸನ್ಮಾನ್ಯ ಶ್ರೀ ರಾಜಾ ರೆಡ್ಡಿ, ಜಂಟಿ ಆಯುಕ್ತರು, ಹುಬ್ಬಳ್ಳಿ, ಸನ್ಮಾನ್ಯ ಶ್ರೀ ಲಕ್ಕಪ್ಪ ಹನಮನ್ನವರ, ಉಪ ಆಯುಕ್ತರು, ಬೆಂಗಳೂರು, ಸನ್ಮಾನ್ಯ ಶ್ರೀ ಶರಣಕುಮಾರ ಕೋಳೂರು, ಐ.ಟಿ.ಐ.ಹುಬ್ಬಳ್ಳಿ ಹಾಗೂ ಸನ್ಮಾನ್ಯ ಶ್ರೀ ಜೈಪ್ರಕಾಶ, ಐ.ಟಿ.ಐ. ಕಲಬುರ್ಗಿ ಇವರುಗಳು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಕಲಬುರ್ಗಿ, ಮಾಜಿ ಧರ್ಮದರ್ಶಿಗಳಾದ ಶ್ರೀ ಮಹೇಂದ್ರ ಎಚ್. ಸಿಂಘಿ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಹುಬ್ಬಳ್ಳಿಯ KIMS ನಿರ್ದೇಶಕರಾದ ಡಾ|| ಈಶ್ವರ ಹೊಸಮನಿ ರವರ ಬೆಟ್ಟಿ.

ದಿನಾಂಕ:-17.07.2025 ರಂದು ಬೆಳಿಗ್ಗೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಹುಬ್ಬಳ್ಳಿಯ KIMS ನಿದೇರ್ಶಕರಾದ ಡಾ|| ಈಶ್ವರ ಹೊಸಮನಿ ಇವರು ಕುಟುಂಬ ಸಮೇತರಾಗಿ ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು. ಗಣ್ಯರನ್ನು ಶ್ರೀಮಠದವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ KIMS ನಿದೇರ್ಶಕರಾದ ಡಾ|| ಈಶ್ವರ ಹೊಸಮನಿರವರು ಸಿದ್ಧಾರೂಢಮಠದ ಆವರಣದಲ್ಲಿ ಒಂದು ವಿಶೇಷವಾದ ಆಫ್ರಿಕಾ ಮೂಲದ ಬೌಬ್ಯಾಬ್ (Baobab tree) (Adansonia digital) ಸಸಿಯನ್ನು ನೆಟ್ಟು ವನಮಹೋತಸ್ವವನ್ನು ಆಚರಿಸಿದರು. ಈ ಬೌಬ್ಯಾಬ್ ಮರವು ಅತ್ಯಂತ ವಿಶೇಷವಾಗಿದ್ದು ಇದು ಸುಮಾರು ಐದು ಸಾವಿರ ವರ್ಷಗಳವರೆಗೆ ಬದುಕಬಲ್ಲಂತಹ ಪವಿತ್ರವಾದ ಮರವಾಗಿರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್ ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಸರ್ವಮಂಗಳಾ ನಾ. ಪಾಠಕ, ಶ್ರೀ ವಿ. ವಿ ಮಲ್ಲಾಪೂರ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಖ್ಯಾತ ಉದ್ಯಮಿ ಶ್ರೀ ವೆಂಕಟೇಶ ರಾಯಬಾಗಿ ರವರ ಬೆಟ್ಟಿ.

ದಿನಾಂಕ:-17.07.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ದುಬೈನ ಖ್ಯಾತ ಉದ್ದಿಮೆದಾರರಾದ ಶ್ರೀ ವೆಂಕಟೇಶ ರಾಯಬಾಗಿ ರವರು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು ಹಾಗೂ ಶ್ರೀಮಠದಲ್ಲಿ ನಡೆಯುವ ನಿತ್ಯ ಅನ್ನದಾಸೋಹಕ್ಕೆ ರೂ.51,000.00 ಗಳನ್ನು ದೇಣಿಗೆಯಾಗಿ ನೀಡಿದರು ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯ್ಕ, ಹಾಗೂ ಶ್ರೀಮಠದ ಮ್ಯಾನೇಜರರಾದ ಶ್ರೀ ಈರಣ್ಣ ಎಸ್. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಮಾಜಿ ಸಚಿವರಾದ ಪಿ.ಜಿ.ಆರ್. ಶಿಂಧೆ ಇವರ ಭೆಟ್ಟಿ.

ದಿನಾಂಕ:-15.07.2025 ರಂದು ಮಾಜಿ ಸಚಿವರಾದ ಪಿ.ಜಿ.ಆರ್. ಶಿಂಧೆ ಇವರು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಉಭಯ ಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಶ್ರೀಮಠದಿಂದ ಗಣ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಘೋಡಕೆ, ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಎಸ್. ತುಪ್ಪದ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಪಾಂಡುರಂಗ ವಿಠ್ಠಲ ಭಜನೆ ಕಾರ್ಯಕ್ರಮ

ದಿನಾಂಕ:-13.07.2025 ರಂದು ಶ್ರೀಮಠದ ಕೈಲಾಸ ಮಂಟಪದಲ್ಲಿ ಪಾಂಡುರಂಗ ವಿಠ್ಠಲನ ಭಜನೆ ಹಾಗೂ ಭಕ್ತಿ ಗೀತೆಗಳ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಉದಯಕುಮಾರ ಡಿ. ನಾಯಕ, ಶ್ರೀಮತಿ ಗೀತಾ ಟಿ. ಕಲಬುರಗಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಎಸ್. ತುಪ್ಪದ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಅಪಾರ ಭಕ್ತ ಮಂಡಳಿ ಪಾಲ್ಗೊಂಡಿದ್ದರು.

ಶ್ರೀ ಸಿದ್ಧಾರೂಢ ಮಹಾಸ್ವಾಮಿಯವರ ಮಠದಲ್ಲಿ ನೆರವೇರಿದ ಸಂಗೀತ ಸಂದ್ಯಾ ಕಾರ್ಯಕ್ರಮ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-08.07.2025 ರಂದು ರಾತ್ರಿ:-08-00 ಗಂಟೆಗೆ ಶ್ರೀಮಠದ ಆವರಣದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕರಾದ ಸನ್ಮಾನ್ಯ ಶ್ರೀ ಜಯತೀರ್ಥ ಮೇವುಂಡಿ ಇವರಿಂದ ಸಂಗೀತ ಸಂದ್ಯಾ ಕಾರ್ಯಕ್ರಮ ನೆರವೇರಿತು. ಸದರ ಕಾರ್ಯಕ್ರಮದ ಪಾವನ ಸಾನಿದ್ಯವನ್ನು ನ್ಯಾಯ ವೇದಾಂತಾಚಾರ್ಯ ಪ. ಪೂ. ಶ್ರೀ ದಯಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಪೂರ್ಣಾನಂದ ಆಶ್ರಮ, ಕಾಡರಕೊಪ್ಪ ಇವರು ವಹಿಸಿದ್ದರು. ದಿವ್ಯಸಾನಿದ್ಯವನ್ನು ಶ್ರೋ.ಬ್ರ ಸದ್ಗುರು ಸಹಜಯೋಗಿ ಶ್ರೀ ಸಹಜಾನಂದ ಮಹಾಸ್ವಾಮಿಗಳು, ಪೀಠಾಧ್ಯಕ್ಷರು, ಶ್ರೀ ಸಿದ್ಧಾರೂಢರ ದರ್ಶನ ಪೀಠ, ಚಿಕ್ಕನಂದಿ- ಮಹಾಲಿಂಗಪೂರ ಇವರು ವಹಿಸಿದ್ದರು. ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ಶರಣಬಸವ ಚೋಳಿನ, ನಿಲಯ ನಿರ್ದೇಶಕರು, ಆಕಾಶವಾಣಿ ಕೇಂದ್ರ, ಧಾರವಾಡ ಇವರು ನೆರವೇರಿಸಿ ಸದ್ಗುರು ಶ್ರೀ ಸಿದ್ಧಾರೂಢರು ಭಜನೆ, ಕೀರ್ತನೆ, ಸಂಗೀತಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿರುತ್ತಾರೆ. ದೊಡ್ಡ ದೊಡ್ಡ ಕಲಾವಿದರು ಶ್ರೀಗಳವರ ಆಶೀರ್ವಾದವನ್ನು ಪಡೆದುಕೊಂಡು ಪ್ರಖ್ಯಾತಿಯನ್ನು ಪಡೆದು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಂಡಿರುತ್ತಾರೆ. ಅದೇ ರೀತಿಯಾಗಿ ಶ್ರೀ ಜಯತೀರ್ಥ ವೇವುಂಡಿಯವರಿಗೂ ಸಹಿತ ಶ್ರೀ ಸಿದ್ಧಾರೂಢರ ಆಶೀರ್ವಾದ ಶ್ರೀರಕ್ಷೆ ಇರುವುದರಿಂದ ಇವರು ಸಹಿತ ಉನ್ನತ ಸ್ಥಾನವನ್ನು ಪಡೆಯುವುದರಲ್ಲಿ ಸಂದೇಹವಿಲ್ಲ ಅಂತಾ ತಮ್ಮ ಎರಡು ನುಡಿಗಳನ್ನು ಹೇಳಿದರು. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಕೆ.ಎಲ್. ಪಾಟೀಲ, ಹಿರಿಯ ನ್ಯಾಯವಾದಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಹಾಗೂ ಧರ್ಮದರ್ಶಿಗಳು, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ, ಹುಬ್ಬಳ್ಳಿ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ವಹಿಸಿದ್ದರು. ಕಲಾವಿದರಾದ ಪಂಡಿತ ಶ್ರೀ ಜಯತೀರ್ಥ ವೇವುಂಡಿ ಇವರು ನನ್ನ ಹಾಡುಗಾರಿಕೆಯ ಜೀವನವನ್ನು 34 ವರ್ಷಗಳ ಹಿಂದೆ ಶ್ರೀ ಸಿದ್ಧಾರೂಢರ ಸನ್ನಿಧಾನದಲ್ಲಿ ನೆರವೇರಿಸಿದ್ದು ನನ್ನ ಪೂರ್ವಜನ್ಮದ ಪುಣ್ಯ ಅಂತಾ ಭಾವಿಸಿದ್ದೇನೆ. ನಾನು ಏನಾದರೂ ಸಾಧನೆ ಮಾಡುತ್ತಿದ್ದರೆ ಅದು ಶ್ರೀ ಸಿದ್ಧಾರೂಢರ ಆಶೀರ್ವಾದ ಅಂತಾ ತಮ್ಮ ಅನುಭವ ಹಂಚಿಕೊ0ಡರು. ಕಾರ್ಯಕ್ರಮದ ನಿರೂಪಣೆ ಮತ್ತು ಗಣ್ಯರ ಪರಿಚಯವನ್ನು ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ನೆರವೇರಿಸಿದರು. ಪ್ರಾರ್ಥನೆಯನ್ನು ಶ್ರೀ ತುಕಾರಾಮ ಕಠಾರೆ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಸಂಗೀತಾ ಸಂದ್ಯಾ ಕಾರ್ಯಕ್ರಮ




  VIEW ALL