Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಮಹಾಶಿವರಾತ್ರಿ ಉತ್ಸವದ ಸಪ್ತಾಹ ಆರಂಭ.
Date:-03.03.2024 ಶ್ರೀ ಸಿದ್ಧಾರೂಢಮಠದಲ್ಲಿ ಮಹಾಶಿವರಾತ್ರಿ ಉತ್ಸವದ ಸಪ್ತಾಹ ಆರಂಭ.
ಮಹಾಶಿವರಾತ್ರಿ – ಜಾಗರಣೆ
Date:-08.03.2024 ಮಹಾಶಿವರಾತ್ರಿ – ಜಾಗರಣೆ
ಶ್ರೀ ಸಿದ್ಧಾರೂಢಸ್ವಾಮಿಗಳ ರಥೋತ್ಸವ
Date:-09.03.2024 ಶ್ರೀ ಸಿದ್ಧಾರೂಢಸ್ವಾಮಿಗಳ ರಥೋತ್ಸವ
ಶಿವರಾತ್ರಿ ಅಮವಾಸ್ಯೆ
Date:-10.03.2024, ಶಿವರಾತ್ರಿ ಅಮವಾಸ್ಯೆ
ಕೌದಿಪೂಜೆ
Date:-11.03.2024, ಕೌದಿಪೂಜೆಯೊಂದಿಗೆ ಶಿವರಾತ್ರಿ ಉತ್ಸವ ಸಮಾಪ್ತಿ

Daily News
ಶ್ರೀ ಸಿದ್ಧಾರೂಢ ಸ್ವಾಮಿಗಳವರ 188ನೇ ಜನ್ಮೋತ್ಸವ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳವರ 188ನೇ ಜನ್ಮೋತ್ಸವವನ್ನು ದಿನಾಂಕ: 09-04-2024 ರಿಂದ 17-04-2024 ರವರೆಗೆ ಆಚರಿಸಲಾಗುತ್ತಿದ್ದು. ಈ ಕಾರ್ಯಕ್ರಮದ ಅಂಗವಾಗಿ ದಿನಾಂಕ: 17-04-2024 ರಂದು ಮಧ್ಯಾಹ್ನ 12 ಘಂಟೆಗೆ ಶ್ರೀಗಳವರ ಪಾಲಕಿಯು ವಾದ್ಯ ಮೇಳಗಳೊಂದಿಗೆ ನಗರದಲ್ಲಿ ಸಂಚರಿಸಿ ಸಾಯಂಕಾಲ 5 ಘಂಟೆಗೆ ಆರತಿ ಹಾಗೂ ಕುಂಬ ಹೊತ್ತ ಮಹಿಳೆಯರು ಸ್ವಾಗತಿಸಿಕೊಂಡ ನಂತರ ಶ್ರೀಮಠಕ್ಕೆ ತಲುಪುವುದು ನಂತರ ಶ್ರೀಗಳವರ ತೊಟ್ಟಿಲೋತ್ಸವ ನಡೆಯುವುದು. ಈ ಎಲ್ಲಾ ಕಾರ್ಯಕ್ರಮಗಳ ಪ್ರಯೋಜನವನ್ನು ಭಕ್ತಾದಿಗಳು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರುತ್ತೇವೆ.

🌷🙏 ಕೌದಿ ಪೂಜಾ ಮಹತ್ವ 🙏🌷

ಅದ್ವೈತ ಸಾರ್ವಭೌಮ ಚಕ್ರವರ್ತಿ, ಸ್ಥಿತಪ್ರಜ್ಞ, ನಿರಾಭಾರಿ ನಿರ್ಗುಣ ಬ್ರಹ್ಮ, ದೇಶ ಕಂಡ ಶ್ರೇಷ್ಠ ಸಂತ, ಸದ್ಗುರು ಸಿದ್ಧಾರೂಢ ಮಹಾಸ್ವಾಮಿಗಳು ಕೇವಲ ಕೌಪಿನ ಧಾರಣೆಯಾಗಿ ಇಡೀ ದೇಶವನ್ನೇ ಕಾಲ್ನಡಿಗೆಯಲ್ಲಿ ಸಂಚರಿಸಿದ ಮಹಾಯೋಗಿ, ಎಷ್ಟೋ ದಿನಗಳ ವರೆಗೆ ಅನ್ನ ನೀರು ತ್ಯಜಿಸಿ ತಪಸ್ಸನ್ನು ಮಾಡಿದ ಮಹಾನ್ ತಪಸ್ವಿ, ಕೊನೆಗೆ ಹುಬ್ಬಳ್ಳಿಯಲ್ಲಿ ನೆಲೆಸಿ ಭಕ್ತರು ದಾನಿಗಳು ಕೊಟ್ಟಂತ ಬಂಗಾರ ವಜ್ರ ವೈಡೂರ್ಯಗಳ ಅಲಂಕಾರದಿಂದ ಪೂಜೆ ಗೈದರು ಹಿಗ್ಗದೆ ತಲೆಯ ಮೇಲೆ ಬೆಂಕಿಯನಿಟ್ಟರು ಕುಗ್ಗದೆ ಸದಾ ಸ್ಥಿತಿಪ್ರಜ್ಞ ಸ್ಥಿತಿಯಲ್ಲಿ ಸರ್ವ ಭಕ್ತರನ್ನು ಉದ್ದರಿಸಿದ ಮಹಾನ್ ಯೋಗಿ. ನಿಜವಾದ ಸಾಧು ಸತ್ಪುರುಷರ ನಿಜ ಸ್ವರೂಪ ಮತ್ತು ವೈರಾಗ್ಯ ಸ್ಥಿತಿಯನ್ನು ಪ್ರತಿಬಿಂಬಿಸುವ & ಸದ್ಗುರುಗಳ ಇಚ್ಚೆಯಂತೆ ವರ್ಷದಲ್ಲಿ ಒಂದು ದಿನ " ಕೌದಿ ಪೂಜೆ "ಯನ್ನು ಆಚರಣೆಗೆ ತರಲಾಯಿತು.... ಓಂ ನಮಃ ಶಿವಾಯ 🌷🙏🌷

2024 ನೇ ವರ್ಷದ ಶಿವರಾತ್ರಿ ಮಹೋತ್ಸವಕ್ಕೆ ಮಾನ್ಯ ಮುಖ್ಯ ಆಡಳಿತಾಧಿಕಾರಿಗಳು, ಶ್ರೀ ಸಿದ್ಧಾರೂಢಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಹುಬ್ಬಳ್ಳಿ ಹಾಗೂ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ. & ಶ್ರೀ ಮಠದ ಧರ್ಮದರ್ಶಿಗಳು ಭಕ್ತವೃಂದಕ್ಕೆ ಮಾಡುವ ವಿನಯಪೂರ್ವಕ ವಿಜ್ಞಾಪನೆಗಳು

ಮಹಾಶಿವರಾತ್ರಿ ಮಹೋತ್ಸವವು ಇದೇ ಶೋಭಕೃತನಾಮ ಸಂವತ್ಸರ ಮಾಘ ವದ್ಯ ಸಪ್ತಮಿ ದಿನಾಂಕ: 03.03.2024 ರವಿವಾರದಂದು ಸೂರ್ಯೋದಯಕ್ಕೆ ಶಿವನಾಮ ಸಪ್ತಾಹದೊಂದಿಗೆ ಪ್ರಾರಂಭವಾಗುವುದು. ಪ್ರತಿನಿತ್ಯ ಬೆಳಿಗ್ಗೆ 07-45 ಘಂಟೆಗೆ ಶ್ರೀ ಸಿದ್ಧಾರೂಢ ಭಾರತಿ ಕಲ್ಪದೃಮ ಪುರಾಣ ಪಠಣ, ಮುಂಜಾನೆ 09-00 ಘಂಟೆಗೆ ಮಹಾತ್ಮರಿಂದ, ಪಂಡಿತರಿ0ದ ವೇದಾಂತ ಉಪನ್ಯಾಸಗಳು ನಡೆಯುವವು. ಸಾಯಂಕಾಲ 05-00 ಘಂಟೆಗೆ ಕೀರ್ತನೆ ನಡೆದು ಮಹಾಪೂಜೆ ನಡೆಯುವುದು. ದಿನಾಂಕ: 08.03.2024 ರ ಮಾಘ ವದ್ಯ ತ್ರಯೋದಶಿ ಶುಕ್ರವಾರ ಮಹಾಶಿವರಾತ್ರಿ ಜಾಗರಣೆ ನಿಮಿತ್ಯ ಪಲ್ಲಕ್ಕಿ ಉತ್ಸವವು ಗಣೇಶಪೇಟೆಯಲ್ಲಿರುವ ಶ್ರೀ ಜಡಿಸ್ವಾಮಿ ಮಠಕ್ಕೆ ಹೋಗಿ ಮರಳಿ ಶ್ರೀಮಠಕ್ಕೆ ಬರುವುದು. ದಿನಾಂಕ 09.03.2024 ನೇ ಶನಿವಾರ ಪಲ್ಲಕ್ಕಿ ಉತ್ಸವ ನಂತರ ಸಾಯ0ಕಾಲ 05-30 ಘಂಟೆಗೆ ರಥೋತ್ಸವ ಜರುಗುವುದು. ದಿನಾಂಕ 10.03.2024 ರ ರವಿಮವಾರ ಶಿವರಾತ್ರಿ ಅಮವಾಸ್ಯೆ ಬೆಳಿಗ್ಗೆ 05-00 ರಿಂದ ೦6:೦೦ ಘಂಟೆ ವರೆಗೆ ಭಸ್ಮ ಸ್ನಾನ ನೆರವೇರುವುದು. ದಿನಾಂಕ 11.03.2024 ನೇ ಸೋಮವಾರ ಸಾಯಂಕಾಲ 6 ಘಂಟೆಗೆ ಕೌದಿ ಪೂಜೆಯೊಂದಿಗೆ ಉತ್ಸವವು ಸಮಾಪ್ತವಾಗುವದು. ಕಾರಣ ಸದ್ಭಕ್ತರು ಸಹ ಕುಟುಂಬ ಪರಿವಾರದೊಡನೆ ಬಂದು ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮತ್ತು ಸದ್ಗುರು ಶ್ರೀ ಗುರುನಾಥಾರೂಢ ಸ್ವಾಮಿಯವರ ದರ್ಶನ ಆಶೀರ್ವಾದ ಪಡೆದು ಉತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು ಮನ ಧನ ದಿಂದ ಸೇವೆ ಸಲ್ಲಿಸಿ, ಸದ್ಗುರು ಶ್ರೀ ಸಿದ್ಧಾರೂಢರ ಮತ್ತು ಸದ್ಗುರು ಶ್ರೀ ಗುರುನಾಥಾರೂಢರ ಕೃಪೆಗೆ ಪಾತ್ರರಾಗಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕಾಗಿ ವಿನಂತಿ.

2024 ನೇ ಸಾಲಿನ ಶಿವರಾತ್ರಿ ಜಾತ್ರಾ ಮಹೋತ್ಸವ

2024 ನೇ ಸಾಲಿನ ಶಿವರಾತ್ರಿ ಜಾತ್ರಾ ಮಹೋತ್ಸವ

ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಲಕ್ಷ ರುದ್ರಾಭಿಷೇಕ ಮತ್ತು ತುಲಾಭಾರ ಸೇವಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ

ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ ಕಮೀಟಿಯಿಂದ ಜಗದ್ಗುರು ಶ್ರೀ ಸಿದ್ಧಾರೂಢರ 190ನೇ ಜಯಂತಿ ಉತ್ಸವ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ 115 ನೇ ಜಯಂತ್ಯುತ್ಸವ, ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ತ 2024 ನೇ ಸಾಲಿನ ಶಿವರಾತ್ರಿ ಮಹೋತ್ಸವದಿಂದ 2025 ನೇ ಸಾಲಿನ ಶಿವರಾತ್ರಿ ಮಹೋತ್ಸವದ ವರೆಗೆ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ನಿಮಿತ್ತ ಲಕ್ಷ ರುದ್ರಾಭಿಷೇಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ದಿನಾಂಕ:-18.02.2024 ರಂದು ಮುಂಜಾನೆ ೦9-೦೦ ಘಂಟೆಗೆ ನೆರವೇರಿತು. ಈ ಸಂದರ್ಭದಲ್ಲಿ ಸಾನಿಧ್ಯವನ್ನು ಪರಮ ಪೂಜ್ಯ ಶಾಂತಾನAದ ಸ್ವಾಮಿಗಳು, ಸಿದ್ಧಾರೂಢ ಮಠ, ಹುಬ್ಬಳ್ಳಿ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಮೇಲ್ಮನೆ ಸಭಾ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ ಇವರು ವಹಿಸಿದ್ದರು. ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಸವರಾಜ ಚ. ಕಲ್ಯಾಣಶೆಟ್ಟರ, ಲಕ್ಷ ರುದ್ರಾಭಿಷೇಕ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಅಂದಾನಪ್ಪ ಚ. ಚಾಕಲಬ್ಬಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷರುದ್ರಾಭಿಷೇಕ ಮತ್ತು ತುಲಾಭಾರ ಸೇವೆ ಕಾರ್ಯಕ್ರಮಗಳ ಕಾರ್ಯಾಧ್ಯಕ್ಷರಾದ ಶ್ರೀ ಶಾಮಾನಂದ ಬಾಳಪ್ಪ ಪೂಜೇರಿ ಇವರು ಸ್ವಾಗತಿಸಿದರು, ತುಲಾಭಾರ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ವಿನಾಯಕ ಅ. ಘೋಡ್ಕೆ, , ಭಕ್ತರ ಮೇಲ್ಮನೆ ಸಭಾ ಉಪಾಧ್ಯಕ್ಷರಾದ ಶ್ರೀ ಬಿ.ಆರ್.ಬಾಗೇವಾಡಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಮಂಜುನಾಥ ಎಸ್ ಮುನವಳ್ಳಿ, ಡಾ|| ಗೋವಿಂದ ಮಣ್ಣೂರ, ಶ್ರೀ ಚನ್ನವೀರ ಮುಂಗರವಾಡಿ, ಶ್ರೀಮತಿ ಗೀತಾ ಟಿ ಕಲಬುರ್ಗಿ, ಶ್ರೀ ವಿ.ಡಿ. ಕಾಮರೆಡ್ಡಿ, ಶ್ರೀ ರಮೇಶ ಎಸ್ ಬೆಳಗಾವಿ, ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಾಜಿ ಗೌರವ ಕಾರ್ಯದರ್ಶಿಗಳಾದ ಶ್ರೀ ಎಸ್.ಆಯ್. ಕೋಳಕೂರ ಇವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು, ಶ್ರೀಮಠದ ಮ್ಯಾನೇಜರ ಈರಣ್ಣ ಎಸ್ ತುಪ್ಪದ ಮತ್ತು ಸಿಬ್ಬಂಧಿ ವರ್ಗದವರು ಪಾಲ್ಗೊಂಡಿದ್ದರು.

75ನೇ ಗಣರಾಜ್ಯೋತ್ಸವ ದಿನ.

ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ: 26.01.2024 ರಂದು 75ನೇ ಗಣರಾಜ್ಯೋತ್ಸವ ದಿನದ ಧ್ವಜಾರೋಹಣವನ್ನು ಟ್ರಸ್ಟ್ ಕಮೀಟಿಯವತಿಯಿಂದ ವೈಸ್-ಚೇರ್‌ಮನ್ನರಾದ ಶ್ರೀ ಉದಯಕುಮಾರ ಡಿ. ನಾಯ್ಕ ಇವರು ಬೆಳಿಗ್ಗೆ 8-30 ಘಂಟೆಗೆ ಪೂಜೆ ನೆರವೇರಿಸಿ ಧ್ವಜಾರೋಹಣವನ್ನು ನೆರವೇರಿಸಿದರು, ಪೂಜ್ಯ ಶ್ರೀ ಶಾಂತಾನಂದ ಸ್ವಾಮಿಗಳು, ಶ್ರೀ ಸಿದ್ಧಾರೂಢ ಮಠ, ಹುಬ್ಬಳ್ಳಿ ಇವರು ಸಾನಿಧ್ಯವನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀ ವಿ.ವಿ.ಮಲ್ಲಾಪೂರ ಮತ್ತು ಮಾಜಿ ಗೌರವ ಕಾರ್ಯದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ತುಪ್ಪದ, ಶ್ರೀಮಠದ ಸಾಧುಗಳು, ಸಿಬ್ಬಂದಿವರ್ಗದವರು, ಪಾಠಶಾಲಾ ವಿದ್ಯಾರ್ಥಿಗಳು, ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರೆಂದು ಶ್ರೀಮಠದ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.

Main office renovation and Development works Inauguration function held on 11.01.2024.

11.01.2024 ರಂದು ಕಾರ್ಯಾಲಯ ಉದ್ಘಾಟನೆ, & ವಿವಿಧ ಕೆಲಸಗಳು ಅಡಿಗಲ್ಲು ಕಾರ್ಯಕ್ರಮವನ್ನು ಶ್ರೀ ಮಠದ ಮುಖ್ಯ ಆಡಳಿತಾಧಿಕಾರಿಗಳು ಮತ್ತು ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಕೆ.ಜಿ.ಶಾಂತಿ ಮೇಡಂ ಉದ್ಘಾಟನೆ ಮಾಡಿದರು. ಈ ಸಂದರ್ಭದಳ್ಳಿ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಶ್ರೀ ಬಸವರಾಜ ಕಲ್ಯಾಣಶೆಟ್ಟರ, ಉಪಾಧ್ಯಕ್ಷರಾದ ಶ್ರೀ ಉದಯಕುಮಾರ್ ನಾಯ್ಕ, ಗೌರವ ಕಾರ್ಯದರ್ಶಿಗಳ ಶ್ರೀಮತಿ ಸರ್ವಮಂಗಳ ಪಾಠಕ, ಧರ್ಮದರ್ಶಿಗಳಾದ ಶ್ರೀ ಚೆನ್ನವೀರ ಮುಂಗುರುವಾಡಿ, ಬಾಳು ಮಗಜಿಕೊಂಡಿ, ಮಂಜುನಾಥ ಮುನರಳ್ಳಿ, ಡಾ|| ಗೋವಿಂದ ಮಣ್ಣೂರ, ಶ್ರೀಮತಿ ಗೀತಾ ಕಲಬುರ್ಗಿ, ಶ್ರೀ ರಮೇಶ್ ಬೆಳಗಾವಿ ಇವರು ಉಪಸ್ಥಿತರಿದ್ದರು

Room Reservation counter opening function.

05.01.2024 ರಂದು ಶ್ರೀ ಮಠದ ಮುಖ್ಯ ಆಡಳಿತಾಧಿಕಾರಿಗಳು ಮತ್ತು ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಕೆ.ಜಿ.ಶಾಂತಿ ಮೇಡಂ ಕೊಠಡಿ ಕಾಯ್ದಿರಿಸುವಿಕೆ ಕೌಂಟರ್ ಉದ್ಘಾಟನೆ ಮಾಡಿದರು. ಈ ಸಂದರ್ಭದಳ್ಳಿ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಶ್ರೀ ಬಸವರಾಜ ಕಲ್ಯಾಣಶೆಟ್ಟರ, ಉಪಾಧ್ಯಕ್ಷರಾದ ಶ್ರೀ ಉದಯಕುಮಾರ್ ನಾಯ್ಕ, ಗೌರವ ಕಾರ್ಯದರ್ಶಿಗಳ ಶ್ರೀಮತಿ ಸರ್ವಮಂಗಳ ಪಾಠಕ, ಧರ್ಮದರ್ಶಿಗಳಾದ ಶ್ರೀ ಚೆನ್ನವೀರ ಮುಂಗುರುವಾಡಿ, ಬಾಳು ಮಗಜಿಕೊಂಡಿ, ಮಂಜುನಾಥ ಮುನರಳ್ಳಿ, ಡಾ|| ಗೋವಿಂದ ಮಣ್ಣೂರ, ಶ್ರೀಮತಿ ಗೀತಾ ಕಲಬುರ್ಗಿ, ಶ್ರೀ ರಮೇಶ್ ಬೆಳಗಾವಿ ಇವರು ಉಪಸ್ಥಿತರಿದ್ದರು




  VIEW ALL