ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಬೆಟ್ಟಿ.
Date : 24-08-2025
ದಿನಾಂಕ:-24.08.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ, ಮಾನ್ಯ ಸಚಿವರು, ಅರಣ್ಯ ಇಲಾಖೆ, ಇವರು ಕುಟುಂಬ ಸಮೇತರಾಗಿ ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಮಾನ್ಯ ಅರಣ್ಯ ಮಂತ್ರಿಗಳ ಅಮೃತ ಹಸ್ತದಿಂದ ಶ್ರೀಮಠದ ಆವರಣದಲ್ಲಿ ಪವಿತ್ರವಾದ ಆಫ್ರೀಕಾ ಮೂಲದ ಹುಣಸಿ ಗಿಡ ಸಸಿಯನ್ನು (Baobab Tree) ನಡೆಲಾಯಿತು. ಈ ಮರದ ಶಾಸ್ತ್ರೀಯ ಹೆಸರು Adensonia digitata ಆಗಿದ್ದು ಇದು 4000 ವರ್ಷಗಳ ವರೆಗೆ ಬದುಕಬಹುದಾದ ಮರವಾಗಿರುತ್ತದೆ. ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ಉದಯಕುಮಾರ ಡಿ. ನಾಯ್ಕ, ಮಾಜಿ ಚೇರ್ಮನ್ನರಾದ ಶ್ರೀ ಮಹೇಂದ್ರ ಎಚ್. ಸಿಂಘಿ, ಭಕ್ತರಾದ ಶ್ರೀ ಮನೋಜಕುಮಾರ ಗದುಗಿನ, ಶ್ರೀ ನಾಗರಾಜ ಗೌರಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.