ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಲೆಕ್ಕ ಪರಿಶೋಧಕರ ಬೆಟ್ಟಿ.
Date : 25-07-2025
ದಿನಾಂಕ:-25.07.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಸನ್ಮಾನ್ಯ ಶ್ರೀ ಸಿಎ. ಕೆ. ರಘು, ಲೆಕ್ಕ ಪರಿಶೋಧಕರು, ಮಾಜಿ ಅಧ್ಯಕ್ಷರು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ, ನ್ಯೂ ದೆಹಲಿ, ಸನ್ಮಾನ್ಯ ಶ್ರೀ ಸಿಎ. ಕೋಥಾ ಶ್ರೀನಿವಾಸ, ಲೆಕ್ಕ ಪರಿಶೋಧಕರು, ಮಾಜಿ ಚೇರ್ಮನ್ನರು, ಎಸ್.ಐ.ಆರ್.ಸಿ. ಚೆನೈ, ಹಾಗೂ ಲೆಕ್ಕ ಪರಿಶೋಧಕರುಗಳಾದ ಸನ್ಮಾನ್ಯ ಶ್ರೀ ಸಿಎ. ಎನ್.ಎಸ್. ಅಯ್ಯನಗೌಡರ, ಹುಬ್ಬಳ್ಳಿ, ಸನ್ಮಾನ್ಯ ಶ್ರೀ ಸಿಎ. ಭರತ ಬಂಡಾರಿ, ಹುಬ್ಬಳ್ಳಿ ಹಾಗೂ ಸಿಎ. ಎಸ್.ಎನ್. ಮನ್ನಾಪುರ, ಇಳಕಲ್ ಇವರುಗಳು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ, ಗೌರವ ಧರ್ಮದರ್ಶಿಗಳಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.