ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಡಾ|| ಪ್ರವೀಣಭಾಯಿ ತೊಗಾಡಿಯಾ ಇವರ ಭೆಟ್ಟಿ
Date : 16-06-2025
ದಿನಾಂಕ:-16.04.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಡಾ|| ಪ್ರವೀಣಭಾಯಿ ತೊಗಾಡಿಯಾ ಇವರು ಬೆಟ್ಟಿ ಕೊಟ್ಟು ಉಭಯಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರಿಗೆ ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ವೈಸ್ ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಸಿದ್ಧನಗೌಡ ಪಿ. ಪಾಟೀಲ, ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರೆಂದು ಶ್ರೀಮಠದ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.