Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಭಗವಚ್ಚಿಂತನ ಸಾಧನ ಶಿಬಿರ
Date:-08.07.2024 ಶ್ರೀಮಠದಲ್ಲಿ ಭಗವಚ್ಚಿಂತನ ಸಾಧನ ಶಿಬಿರ ಪ್ರಾರಂಭ
ಗುರುಪೂರ್ಣಿಮೆ
Date:-21.07.2024 ಕಡ್ಲಿಗಡಬ ಹುಣ್ಣಿಮೆ, ಗುರುಪೂರ್ಣಿಮೆ ಶ್ರೀಮಠದಲ್ಲಿ ಮೊಸರು ಗಡಿಗೆ ಒಡೆಯುವುದು.

Daily News
ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಗುರುಪೂರ್ಣಿಮೆ ಆಚರಣೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಇದೇ ದಿನಾಂಕ: 21.07.2024 ರಂದು ಗುರುಪೂರ್ಣಿಮೆ ನಿಮಿತ್ಯ ವಿವಿಧ ಕಾರ್ಯಕ್ರಮಗಳು ನಡೆದವು ಬೆಳಿಗ್ಗೆ 6-೦೦ ಘಂಟೆಗೆ ಕಾಕಡಾರತಿ ಪೂಜೆ, 12-3೦ ಘಂಟೆಗೆ ಅನ್ನ ಸಂತರ್ಪಣೆ, ಮುಂಜಾನೆ:-೦7-೦೦ ರಿಂದ 12-3೦ ರ ವರೆಗೆ ಅಭಿಷೇಕ, ಸಾಯಂಕಾಲ : ೦7-೦೦ ಘಂಟೆಗೆ ಶ್ರೀಗಳವರ ಮಂದಿರದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಜರುಗಿತು, ಗುರುವಂದನಾ ಸಮಾರಂಭದ ಸಾನಿಧ್ಯವನ್ನು ಪರಮಪೂಜ್ಯಶ್ರೀ ಸಹಜಾನಂದ ಸ್ವಾಮಿಗಳು ಪೀಠಾಧ್ಯಕ್ಷರು ಸಿದ್ಧಾರೂಢ ದರ್ಶನಪೀಠ, ಚಿಕ್ಕನಂದಿ ಹಾಗೂ ಮಹಾಲಿಂಗಪೂರ ಇವರು ವಹಿಸಿದ್ದರು. ನೇತೃತ್ವವನ್ನು ಪರಮ ಪೂಜ್ಯ ಶ್ರೀ ಬಸವರಾಜ ಸ್ವಾಮಿಗಳು, ಶಿವಾನಂದ ಮಠ, ರನ್ನ ಬೆಳಗಲಿ ಇವರು ವಹಿಸಿದ್ದರು. ಪರಮ ಪೂಜ್ಯ ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ, ಪರಮ ಪೂಜ್ಯ ಶ್ರೀ ಪರಿಪೂರ್ಣಾನಂದ ಸ್ವಾಮಿಗಳು, ಬೆಳಹೊಡ, ಪರಮ ಪೂಜ್ಯ ಶ್ರೀ ಆತ್ಮಾನಂದ ಸ್ವಾಮಿಗಳು, ಗೋಕಾಕ, ಪರಮ ಪೂಜ್ಯ ಶ್ರೀ ಶಾಂತಾನAದ ಸ್ವಾಮಿಗಳು, ಶ್ರೀ ಸಿದ್ಧಾರೂಢ ಮಠ, ಹುಬ್ಬಳ್ಳಿ ಇವರುಗಳು ಉಪಸ್ಥಿತರಿದ್ದರು, ಅಧ್ಯಕ್ಷತೆಯನ್ನು ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಚೇರಮನ್ನರು, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಹುಬ್ಬಳ್ಳಿ ಇವರು ವಹಿಸಿದ್ದರು. ಪೂಜ್ಯ ಮಹಾತ್ಮರಿಗೆ ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಧರ್ಮದರ್ಶಿಗಳಾದ ಡಾ|| ಗೋವಿಂದ ಜಿ. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಕೋಟಿ ಬಿಲ್ವಾರ್ಚನೆ & 16ನೇ ವರ್ಷದ ಭಗವಚ್ಚಿಂತನ ಸಾಧನ ಶಿಬಿರದ ಉದ್ಘಾಟನಾ ಸಮಾರಂಭ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ದಿನಾಂಕ:-07.07.2024 ರಿಂದ 15.09.2024 ರವರೆಗೆ ನಡೆಯುವ ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮ ಹಾಗೂ ದಿನಾಂಕ: 07.07.2024 ರಿಂದ 03.08.2024 ರವರೆಗೆ ನಡೆಯುವ 16ನೇ ವರ್ಷದ ಭಗವಚ್ಚಿಂತನ ಸಾಧನ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಗೋಕಾಕದ ಶ್ರೀ ಶಾಮಾನಂದ ಆಶ್ರಮದ ಸದ್ಗುರು ಶ್ರೀ ಅತ್ಯಾನಂದ ಮಹಾಸ್ವಾಮಿಗಳು, ಪಾವನ ಸಾನಿದ್ಯವನ್ನು ವಹಿಸಿದ್ದ ಸಹಜಯೋಗಿ ಶ್ರೋ.ಬ್ರ.ಸದ್ಗುರು ಶ್ರೀ ಸಹಜಾನಂದ ಮಹಾಸ್ವಾಮಿಗಳು, ಪೀಠಾಧ್ಯಕ್ಷರು, ಶ್ರೀ ಸಿದ್ಧಾರೂಢರ ದರ್ಶನ ಪೀಠ, ಚಿಕ್ಕನಂದಿ, ಸಾನಿದ್ಯ ವಹಿಸಿದ ಅಣ್ಣಿಗೇರಿ ದಾಸೋಹ ಮಠದ ಪೀಠಾಧೀಶರಾದ ಪರಮ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಮ್ಮುಖ ಸ್ಥಾನವನ್ನು ಪರಮ ಪೂಜ್ಯ ಶ್ರೀ ಬಸವರಾಜ ಮಹಾಸ್ವಾಮಿಗಳು, ಶಿವಾನಂದ ಆಶ್ರಮ ರನ್ನತಿಮ್ಮಾಪೂರ, ಪರಮ ಪೂಜ್ಯ ಶ್ರೀ ಆತ್ಮಾನಂದ ಮಹಾಸ್ವಾಮಿಗಳು, ಗೋಕಾಕ, ಪರಮಪೂಜ್ಯ ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ ಇವರುಗಳು ವಹಿಸಿದ್ದರು, ಸಭೆಯ ಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಇವರು ವಹಿಸಿದ್ದರು, ಭಗವಚ್ಚಿಂತನ ಸಾಧನ ಶಿಬಿರದ ಸಂಚಾಲಕರು ಹಾಗೂ ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಿ. ಪೂಜೇರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು, ಕೋಟಿ ಬಿಲ್ವಾರ್ಚನೆಯ ಅದ್ಯಕ್ಷರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ಉಪಸ್ಥಿತ ವಹಿಸಿದ್ದರು, ಪ್ರಾರ್ಥನೆಯನ್ನು ಶ್ರೀ ಮಲ್ಲನಗೌಡ ಶೆಗುಣಸಿ, ಸಾ|| ಗೋಕಾಕ ಇವರು ನೆರವೇರಿಸಿದರು, ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ವೈಸ್-ಚೇರ್‌ಮನ್ನರಾದ ಶ್ರೀ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಬಾಳು ಮಗಜಿಕೊಂಡಿ, ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀ ವಿ.ವಿ.ಮಲ್ಲಾಪೂರ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀ ಸಿದ್ಧನಗೌಡ ಪಿ. ಪಾಟೀಲ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಕಲಬುರ್ಗಿ ಹಾಗೂ ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ ಹಾಗೂ ನೂರಾರು ಜನ ಸಾಧಕರು ಮತ್ತು ಪೂಜಾರ್ಥಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ, ಹುಬ್ಬಳ್ಳಿ ಮತ್ತು ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆ, ನವದೆಹಲಿ ಇವರ ಸಹಯೋಗದಲಿಶ್ರೀ ಸಿದ್ಧಾರೂಢ ಮಹಾಸ್ವಾಮಿಜಿಯವರ ಅಂಚೆ ಚೀಟಿ ಬಿಡುಗಡೆ ಸಮಾರಂಭ. ದಿ: 06.07.2024 ರ ಶನಿವಾರ ಸಾಯಂಕಾಲ:- ೦6-೦೦ ಘಂಟೆಗೆ

ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮ

ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮವು ದಿನಾಂಕ:-01.07.2024 ರಿಂದ 15.09.2024 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಮುಂಜಾನೆ:-09-00 ಘಂಟೆಗೆ ಪ್ರಾರಂಭ.

ಶ್ರೀ ಸಿದ್ಧಾರೂಢ ಮಹಾಸ್ವಾಮಿಜಿಯವರ ಅಂಚೆ ಚೀಟಿ ಬಿಡುಗಡೆ ಸಮಾರಂಭ

ಶ್ರೀ ಸಿದ್ಧಾರೂಢ ಮಹಾಸ್ವಾಮಿಜಿಯವರ ಅಂಚೆ ಚೀಟಿ ಬಿಡುಗಡೆ ಸಮಾರಂಭ. ದಿ: 06.07.2024 ರ ಶನಿವಾರ ಸಾಯಂಕಾಲ:- ೦6-೦೦ ಘಂಟೆಗೆ

ಜಗದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ 16 ನೇ ವರ್ಷದ “ಭಗವಚ್ಚಿಂತನ ಸಾಧನ ಶಿಬಿರ”

ಜಗದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ 16 ನೇ ವರ್ಷದ “ಭಗವಚ್ಚಿಂತನ ಸಾಧನ ಶಿಬಿರ” ರವಿವಾರ ದಿನಾಂಕ: 07-07-2024 ರಿಂದ ಶನಿವಾರ ದಿನಾಂಕ: -03.08-2024 ರವರೆಗೆ ಸ್ಥಳ: ಶ್ರೀಮಠದ ಆವರಣ

ಸನ್ಮಾನ್ಯ ಶ್ರೀಮತಿ ಕೆ.ಜಿ.ಶಾಂತಿ, ಇವರಿಗೆ ಆತ್ಮೀಯ ಅಭಿನಂದನಾ ಸಮಾರಂಭ.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-26.06.2024 ರಂದು ಮುಂಜಾನೆ 11-30 ಕ್ಕೆ ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀಮತಿ ಕೆ.ಜಿ.ಶಾಂತಿ ಮೇಡಮ್ ಇವರನ್ನು ಶ್ರೀಮಠದ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ, ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ವೈಸ್-ಚೇರ್‌ಮನ್ನರಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀ ವಿ.ವಿ.ಮಲ್ಲಾಪುರ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಚೆನ್ನವೀರ ಡಿ. ಮುಂಗುರವಾಡಿ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀ ವಿ.ಡಿ.ಕಾಮರಡ್ಡಿ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ವಸಂತ ವಾಯ್. ಸಾಲಗಟ್ಟಿ ಇವರುಗಳು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಶ್ರೀ ಸದಾನಂದ ಬೆಂಡಿಗೇರಿ ನೆರವೇರಿಸಿದರು, ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕರ್ನಾಟಕಕ್ಕೆ 50 ರ ಸಂಭ್ರಮದ ಹಿನ್ನೆಲೆಯಲ್ಲಿ "ಜ್ಯೋತಿ ರಥಯಾತ್ರೆ"

ಕರ್ನಾಟಕಕ್ಕೆ 50 ರ ಸಂಭ್ರಮದ ಹಿನ್ನೆಲೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮವನ್ನು ವರ್ಷಪೂರ್ತಿ ಆಚರಿಸಲು ಯೋಜನೆ ರೂಪಿಸಲಾಗಿದೆ. ಕನ್ನಡ ನಾಡು, ನುಡಿ, ಪರಂಪರೆ ಸಂಸ್ಕೃತಿಯ ಹಿರಿಮೆಯನ್ನು ಬಿಂಬಿಸುವ ಕಾರ್ಯಕ್ರಮಗಳು ನಡೆಯಲಿವೆ. ಇಂದು ಎಲ್ಲೆಡೆ ಕರ್ನಾಟಕ ರಾಜ್ಯೋತ್ಸವ ಆಚರಣೆಯಾಗುತ್ತಿದೆ. ರಾಜ್ಯಾದ್ಯಂತ ಸಂಚರಿಸಲಿರುವ ಜ್ಯೋತಿ ರಥಯಾತ್ರೆಯು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ಶ್ರೀಮಠದ ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಕನ್ನಡ ಸಂಸ್ಕೃತಿಯ ಇಲಾಖೆಯ ಅಧಿಕಾರಿಗಳು, ಕನ್ನಡ ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.
  VIEW ALL