ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಶ್ರೀಮನ್ನ ನಿಜಗುಣಶಿವಯೋಗಿಗಳ ಜಯಂತಿ ಕಾರ್ಯಕ್ರಮ
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಶ್ರೀಮನ್ನ ನಿಜಗುಣಶಿವಯೋಗಿಗಳ ಜಯಂತಿ ಕಾರ್ಯಕ್ರಮಗಳು ದಿನಾಂಕ: 11.11.2025 ರಿಂದ 13.11.2025 ರವರೆಗೆ ನಡೆಯುತ್ತವೆ. ಈ ಕಾರ್ಯಕ್ರಮದ ಅಂಗವಾಗಿ ದಿನಾಂಕ:-11.11.2025 ರಂದು ಮುಂಜಾನೆ 10-00 ಘಂಟೆಯಿಂದ ಶ್ರೀಮಠದ ಕೈಲಾಸ ಮಂಟಪದಲ್ಲಿ ಪೂಜ್ಯ ಮಹಾತ್ಮರಿಂದ ಪ್ರವಚನ ನೆರವೇರಿತು, ಇಂದಿನ ಪ್ರವಚನ ವಿಷಯವಾದ “ನೆನೆವುದನುದಿನದುದಯ ಕಾಲದೆಚ್ಚರಿಕೆಯೊಳು” ಸಾನಿಧ್ಯವನ್ನು ವಹಿಸಿದ ಪರಮ ಪೂಜ್ಯಶ್ರೀ ನಿಜಗುಣ ಮಹಾಸ್ವಾಮಿಗಳು, ಬ್ರಹ್ಮವಿದ್ಯಾಶ್ರಮ, ಹಳಕಟ್ಟಿ ಇವರು ಮಾತನಾಡಿ ಸೂರ್ಯ ಉದಯ ಸಮಯದಲ್ಲಿ ಗುರು ಸ್ಮರಣೆಯಿಂದ ಪ್ರಾರಂಭಿಸಿದ ಪರಮಾತ್ಮನ ಸ್ಮರಣೆ ಮಾಡಿದ ಫಲ ಲಭಿಸುತ್ತದೆ. ಮನುಷ್ಯರಾದ ನಾವು ಬೇರೆಯವರ ವಿಚಾರವನ್ನು ಮಾಡದೆ ನನ್ನ ಬಗ್ಗೆ ಸ್ಮರಣೆಯನ್ನು ಮಾಡಬೇಕು ನನ್ನ ಬಗ್ಗೆ ತಿಳಿದುಕೊಂಡು ಧರ್ಮದೆಡೆಗೆ ಸಾಗಬೇಕು ಎಂದು ನುಡಿದರು. ಅಧ್ಯಕ್ಷತೆಯನ್ನು ಪರಮ ಪೂಜ್ಯಶ್ರೀ ಅತ್ಯಾನಂದ ಮಹಾಸ್ವಾಮಿಗಳು, ಶಾಮಾನಂದ ಆಶ್ರಮ ಗೋಕಾಕ ಇವರು ಮಾತನಾಡುತ್ತಾ ಗುರು ಸೇವೆಯಿಂದ ಜೀವನ್ಮುಕ್ತಿ ಪ್ರಾಪ್ತವಾಗುತ್ತದೆ ಎಂದು ನುಡಿದರು. ತತ್ವೋಪದೇಶಕ ಮಹಾತ್ಮರುಗಳಾದ : ಪರಮ ಪೂಜ್ಯಶ್ರೀ ನಾಗೇಶ್ವರಭಾರತಿ ಸ್ವಾಮಿಗಳು, ಸಿದ್ಧಾರೂಢಮಠ, ಉಪ್ಪಾರಟ್ಟಿ. ಪರಮ ಪೂಜ್ಯಶ್ರೀ ಕೃಷ್ಣಾನಂದ ಸ್ವಾಮಿಗಳು, ಯಕ್ಕನಳ್ಳಿ ಪರಮ ಪೂಜ್ಯಶ್ರೀ ಶಿವಾನಂದ ಸ್ವಾಮಿಗಳು, ಬೆನಕನಕೊಪ್ಪ. ಪರಮ ಪೂಜ್ಯಶ್ರೀ ಶಾಂತಾನAದಸ್ವಾಮಿಗಳು, ಹುಬ್ಬಳ್ಳಿ. ಪರಮ ಪೂಜ್ಯಶ್ರೀ ಸಿದ್ಧಾನಂದಭಾರತಿ ಮಹಾಸ್ವಾಮಿಗಳು, ಹುಬ್ಬಳ್ಳಿ. ಪರಮ ಪೂಜ್ಯಶ್ರೀ ಬಸವಾನಂದ ಮಹಾಸ್ವಾಮಿಗಳು, ಶರಣಪ್ಪನವರಮಠ, ಹುಬ್ಬಳ್ಳಿ. ಪರಮ ಪೂಜ್ಯ ಸಚ್ಚಿದಾನಂದ ಮಹಾಸ್ವಾಮಿಗಳು, ಶಾಂತಾಶ್ರಮ ಹುಬ್ಬಳ್ಳಿ ಉಪಸ್ಥಿತರಿದ್ದರು. ಶ್ರೀಮಠದ ಚೇರ್ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ಪ್ರಾಸ್ತಾವಿಕ ಮತ್ತು ಸ್ವಾಗತ ನೆರವೇರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ವೈಸ್-ಚೇರ್ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಡಾ|| ಗೋವಿಂದ ಗು. ಮಣ್ಣೂರ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಭಕ್ತರು ಉಪಸ್ಥಿತರಿದ್ದರು