ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಸನ್ಮಾನ್ಯ ಶ್ರೀ ಅನಿರುದ್ಧ ಇವರ ಭೆಟ್ಟಿ
Date : 22-03-2026
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ದಿನಾಂಕ:-24.03.2026 ರಂದು ಕನ್ನಡ ಚಲನ ಚಿತ್ರ ನಟರಾದ ಸನ್ಮಾನ್ಯ ಶ್ರೀ ಅನಿರುದ್ಧ ಇವರು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಸದ್ಗುರು ಶ್ರೀ ಸಿದ್ಧಾರೂಢರ ಹಾಗೂ ಸದ್ಗುರು ಶ್ರೀ ಗುರುನಾಥಾರೂಢರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯಕ, ಮ್ಯಾನೇಜರ್‌ರಾದ ಶ್ರೀ ಈರಣ್ಣ ಸೋ. ತುಪ್ಪದ ಹಾಗೂ ಶ್ರೀಮಠದ ಸಿಬ್ಬಂದಿ ವರ್ಗದವರು, ಭಕ್ತರು ಉಪಸ್ಥಿತರಿದ್ದರು.