ಲೆಕ್ಕಪರಿಶೋಧಕ (CA) ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಮಾರಿ ಸಮೃದ್ಧಿ ಸಿ. ಮುಂಗುರವಾಡಿ ಇವರಿಗೆ ಸನ್ಮಾನ
Date : 08-03-2026
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಲೆಕ್ಕಪರಿಶೋಧಕ (CA) ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಮಾರಿ ಸಮೃದ್ಧಿ ಚನ್ನವೀರ ಮುಂಗುರವಾಡಿ ಇವರಿಗೆ ಶ್ರೀಮಠದವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಅವರ ವೃತ್ತಿಯಲ್ಲಿ ಇನ್ನು ಹೆಚ್ಚಿನ ಸಾಧನೆಗೈಯಲಿಕ್ಕೆ ಉಭಯಶ್ರೀಗಳವರ ಕೃಪಾರ್ಶೀರ್ವಾದ ಸದಾ ಇರಲೆಂದು ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್ಮನ್ನರಾದ ಶ್ರೀ ಸಿಎ ಚನ್ನವೀರ ಮುಂಗುರವಾಡಿ, ವೈಸ್-ಚೇರ್ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ, ಶ್ರೀ ಅಂದಾನಪ್ಪ ಚಾಕಲಬ್ಬಿ, ಶ್ರೀ ಶಾಮಾನಂದ ಬಿ. ಪೂಜೇರಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯಕ, ಶ್ರೀ ವಿ.ವಿ.ಮಲ್ಲಾಪೂರ, ಶ್ರೀ ವಸಂತ ಸಾಲಗಟ್ಟಿ, ಶ್ರೀ ಮಂಜುನಾಥ ಮುನವಳ್ಳಿ, ಶ್ರೀಮತಿ ಗೀತಾ ಕಲಬುರ್ಗಿ ಹಾಗೂ ಶ್ರೀ ಮಠದ ಮ್ಯಾನೇಜರ್ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗದವರು ಹಾಜರಿದ್ದರು