ಸದ್ಗುರುಶ್ರೀ ಸಿದ್ಧಾರೂಢ ಸ್ವಾಮಿಯವರ 97 ನೇ ಪುಣ್ಯಾರಾಧನೆ ನಿಮಿತ್ಯ ಜರುಗಿದ 2026ನೇ ಸಾಲಿನ ಶ್ರಾವಣ ಮಾಸದ ಜಲರಥೋತ್ಸವ ಜಾತ್ರಾ ಮಹೋತ್ಸವ
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ: 23-08-2026 ರಿಂದ 29.08.2026 ರವರೆಗೆ ಶ್ರಾವಣದ ಜಲರಥೋತ್ಸವದ ಅಂಗವಾಗಿ ಸಪ್ತಾಹ, ಶಿವಯೋಗ, ರಥೋತ್ಸವ, ಕಾರ್ಯಕ್ರಮಗಳು ವಿಜೃಂಭಣೆಯಿAದ ಜರುಗಿದವು, ಪ್ರತಿ ನಿತ್ಯ ಬೆಳಿಗ್ಗೆ 7-00 ಘಂಟೆಯಿAದ 9-00 ಘಂಟೆಯವರೆಗೆ ಶ್ರೀ ಶಿವಾನಂದ ಭಟ್ ಜೋಶಿಯವರಿಂದ ಪುರಾಣ ಪಠಣ ಹಾಗೂ ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 1-00 ಘಂಟೆಯವರೆಗೆ ಕೈಲಾಸ ಮಂಟಪದಲ್ಲಿ ಪೂಜ್ಯ ಮಹಾತ್ಮರಿಂದ ಪ್ರವಚನ ಕಾರ್ಯಕ್ರಮಗಳು ನೆರವೇರಿದವು ಈ ಸಂದರ್ಭದಲ್ಲಿ ಉತ್ಸವಕ್ಕೆ ಬಂದ ಲಕ್ಷಾವಧಿ ಭಕ್ತರಿಗೆ ಮೂರು ವೇಳೆ ಅನ್ನ ಸಂತರ್ಪಣೆಯನ್ನು ಮಾಡಲಾಯಿತು.
ದಿನಾಂಕ: 29.08.2026 ರಂದು ಸಾಯಂಕಾಲ 05-30 ಘಂಟೆಗೆ ನಡೆದ ಶ್ರೀಗಳವರ ಜಲರಥೋತ್ಸವದ ಪೂಜೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ಪೂಜೆಯನ್ನು ನೆರವೇರಿಸಿ ರಥೋತ್ಸವಕ್ಕೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರುಗಳಾದ ಶ್ರೀಮತಿ ಗೀತಾ ಕೆ.ಬಿ. ಶ್ರೀಮತಿ ರಾಜೇಶ್ವರಿ ಹೆಗಡೆ, ಶ್ರೀಮತಿ ಕೆ.ಜಿ.ಶಾಂತಿ, ಶ್ರೀಮತಿ ಹೇಮಾ ಕುಲಕರ್ಣಿ ಹಾಗೂ ಎಲ್ಲಾ ಪೂಜ್ಯನೀಯ ಮಹಾಸ್ವಾಮಿಗಳು ಮತ್ತು ಶ್ರೀಮಠದ ವೈಸ್-ಚೇರ್‌ಮನ್ನರಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಕೆ.ಎಲ್.ಪಾಟೀಲ, ಶ್ರೀ ಶಾಮಾನಂದ ಬಿ. ಪೂಜೇರಿ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ವಸಂತ ವಾಯ್. ಸಾಲಗಟ್ಟಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ವಿ.ವಿ.ಮಲ್ಲಾಪೂರ, ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಶ್ರೀ ವಿ.ಡಿ.ಕಾಮರಡ್ಡಿ, ಹಾಗೂ ಸಿಬ್ಬಂದಿವರ್ಗದವರು ಮತ್ತು ಲಕ್ಷಾವಧಿ ಭಕ್ತರು ಪಾಲ್ಗೊಂಡಿದ್ದರು.
ಪ್ರತಿ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತು, ಹಾಗೂ ಬಂದAತಹ ಜನರಿಗೆ ಸೂಕ್ತ ರಕ್ಷಣೆ ಹಾಗೂ ಬಂದೋಬಸ್ತಿ ಕಾರ್ಯವನ್ನು ಪೋಲೀಸ್ ಸಿಬ್ಬಂದಿಗಳು ಈ ಸಾರಿ ಹೆಚ್ಚಿನ ಪ್ರಮಾಣದಲ್ಲಿ ಮಾಡಿ ಉತ್ಸವವು ಯಶಸ್ವಿಯಾಗುವಲ್ಲಿ ಕಾರಣೀಬೂತರಾಗಿದ್ದಾರೆ.
ಸತತ ಏಳು ದಿವಸಗಳವರೆಗೆ ನಡೆದ ಸದ್ಗುರುಗಳ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಮುತುವರ್ಜಿವಹಿಸಿ ಸೇವಾಕಾರ್ಯವನ್ನು ಮಾಡಿದ ಟ್ರಸ್ಟ್ ಕಮೀಟಿಯ ಪದಾಧಿಕಾರಿಗಳಿಗೆ, ಧರ್ಮದರ್ಶಿಗಳಿಗೆ, ಸಿಬ್ಬಂದಿವರ್ಗದವರಿಗೆ, ಪತ್ರಿಕಾ ಮಾದ್ಯಮದವರಿಗೆ, ಪೋಲೀಸ್ ಅಧಿಕಾರಿಗಳು & ಸಿಬ್ಬಂದಿಗಳಿಗೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ & ಎಲ್ಲ ಸಿಬ್ಬಂದಿಗಳಿಗೆ, ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ & ಸಿಬ್ಬಂದಿಗಳಿಗೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ & ಸಿಬ್ಬಂದಿವರ್ಗಕ್ಕೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ & ಸಿಬ್ಬಂದಿವರ್ಗಕ್ಕೆ ಮತ್ತು ಶ್ರೀಮಠಕ್ಕೆ ತಮ್ಮ ತನು ಮನಧನದಿಂದ ಸೇವೆ ಸಲ್ಲಿಸಿದ ಎಲ್ಲಾ ಭಕ್ತವೃಂದಕ್ಕೂ ಟ್ರಸ್ಟ್ ಕಮೀಟಿಯು ಹೃತ್ಪೂರ್ವಕ ಅಭಿನಂದನೆಗಳು